Get Mystery Box with random crypto!

ನಾವು ಪ್ರೀತಿಯ ಕಾರಣದಿಂದ ಈ ಜಗತ್ತಿಗೆ ಬಂದಿದ್ದೇವೆ... ಆ ಪ್ರೀತಿಯ ಹೆಸರೇ | TARGET COACHING CENTER BELAGAVI

ನಾವು ಪ್ರೀತಿಯ ಕಾರಣದಿಂದ ಈ ಜಗತ್ತಿಗೆ ಬಂದಿದ್ದೇವೆ...
ಆ ಪ್ರೀತಿಯ ಹೆಸರೇ ಅಮ್ಮ!.

ಅಮ್ಮನ ಬಗ್ಗೆ ಬರೆಯುವುದೆಂದರೆ ಅಪರಿಮಿತ ಶಕ್ತಿ ಹೊಂದಿರುವ ಚಂಡಮಾರುತದ ಬಗ್ಗೆ ಬರೆದಂತೆ ಅಥವಾ ಏರುತ್ತಿರುವ ಬೀಳುತ್ತಿರುವ ಕಾಮನಬಿಲ್ಲಿನ ಬಣ್ಣವನ್ನು ಬಣ್ಣಿಸಿದಂತೆ!

ಬುವಿಯ ಮೇಲೆ
ಅತ್ಯಂತ ಸುರಕ್ಷಿತ
ನಿಶ್ಚಿಂತ ಸುಭದ್ರ
ಸಂಪ್ರೀತಿಯ ಜಾಗ
ತಾಯಿಗರ್ಭ.!

ಸುಂದರ ಬೊಟ್ಟಿರಿಸಿ
ಮೆಲ್ಲನೆ ಮುತ್ತಿಟ್ಟವಳು.!
ಚಂದಿರನ ತೋರಿಸಿ
ಸಣ್ಣನೆ ತುತ್ತಿಟ್ಟವಳು.!
ಪ್ರತಿಕ್ಷಣ ಆದರಿಸಿ
ಜೀವವ ಒತ್ತೆಯಿಟ್ಟವಳು.!

ಎಳೆವಯಸ್ಸಿನಲ್ಲೇ ಬದುಕಿನ ಎಲ್ಲಾ ನೋವುಗಳನ್ನು ಮೂಟೆಕಟ್ಟಿಕೊಂಡು, ಬಗಲಲ್ಲಿ ನನ್ನಿರಿಸಿಕೊಂಡು ಭೂಮ್ತಾಯಿಯ ಮಣ್ಣಿನ ಘಮಕ್ಕೆ ಹೊಂದಿಕೊಂಡವಳಿಗೆ ಫರ್ಫ್ಯೂಮ್ ಹಾಕಿ ಈ ದಿನ ಸಿಂಗರಿಸಲು ಸಾಧ್ಯವೇ!?

What I am today is all that my Mom and Dad made me to be and this is the case with most of Us here...

Be grateful to all that ur parents have given U and the love that they show towards U...

Happy Mothers' Day to You All...

Keep Smiling While Loving Ur Parents...