Get Mystery Box with random crypto!

ಕನ್ನಡ ಮೋಟಿವೇಷನ್ ಫೋರಂ (KMF) onepercentsclub's

Logo saluran telegram kannadamotivational1 — ಕನ್ನಡ ಮೋಟಿವೇಷನ್ ಫೋರಂ (KMF) onepercentsclub's
Logo saluran telegram kannadamotivational1 — ಕನ್ನಡ ಮೋಟಿವೇಷನ್ ಫೋರಂ (KMF) onepercentsclub's
Alamat saluran: @kannadamotivational1
Kategori: Politik
Bahasa: Bahasa Indonesia
Pelanggan: 1.55K
Deskripsi dari saluran

Personality Developers (PVT LTD)
ಧೀರ ಹೊರಾಟಗಾರರ ಸಾಮ್ರಾಜ್ಯ ಕಟ್ಟುವ ಕೈಂಕರ್ಯದಲ್ಲಿ...
When Your Goals are more important than Party, welcome to 1%'s club
- Team Onepercentsclub

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


Pesan-pesan terbaru

2023-05-09 07:51:00 ನಾನೊಬ್ಬ ವೋಟ್ ಮಾಡಿಲ್ಲ ಅಂದ್ರೆ ಏನಾಗುತ್ತೆ? ‌

ಅಂತ ಕೇಳ್ತಾರಲ್ಲ ಅಂತವರಿಗೆ ಇದನ್ನ ತೋರ್ಸಿ.

ಪ್ರೀತಿಯ ಕನ್ನಡಿಗರೇ,

ಇವತ್ತು ನೀವು ₹10 ಕೊಟ್ಟು ಒಂದು ಬಿಸ್ಕಿಟ್ ತಗೋತೀರಲ್ಲ,

ಅದರಲ್ಲಿ ಎಂಟಾನೇ ಸರ್ಕಾರಕ್ಕೆ ಹೋಗುತ್ತೆ.

₹100 ಕೊಟ್ಟು ಪೆಟ್ರೋಲ್ ಹಾಕಿಸಿದ್ರೆ ₹50 ರಿಂದ ₹60 ಸರ್ಕಾರಕ್ಕೆ ತಲುಪುತ್ತೆ.

"ಅಯ್ಯೋ, ಅಮ್ಮಾ, ಹುಷಾರಿಲ್ಲ!" ಅಂತ ಆಸ್ಪತ್ರೆಗೆ ಹೋದ್ರಿ ಅನ್ಕೊಳ್ಳೋಣ.

ಅಲ್ಲಿ, ನೀವು ಕೊಳ್ಳುವ ಪ್ರತಿ ₹1000 ರೂಪಾಯಿಯ ಔಷಧಿ ಅಥವಾ ಪಡೆಯುವ ಚಿಕಿತ್ಸೆಯಲ್ಲಿ ₹180 ಸರ್ಕಾರದ ಪಾಲಿದೆ!

ಅಷ್ಟೇ ಯಾಕೆ?

ನೀವು IAS, KAS, PSI, FDA ಆಗಲು ಅಂತಾ, ಕೋಚಿಂಗಳನ್ನು ಸೇರುತ್ತಿರಲ್ಲಾ,

ಅದರಲ್ಲಿ ನೀವು ಕೊಡುವ ₹1,00,000 ಫೀಸ್ ನಲ್ಲಿ 18,000 ರೂಪಾಯಿಗಳು ಸರ್ಕಾರದ ಜೇಬು ತುಂಬಿಸುತ್ತವೆ.

ಶಾಕ್ ಆಗ್ಬೇಡಿ ಇದು ಸ್ಯಾಂಪಲ್ ಮಾತ್ರ!

ಒಬ್ಬ ಬಸ್‌ ಕಂಡಕ್ಟರ್‌ ಚಿಲ್ಲರೆ ಕೊಡ್ಲಿಲ್ಲಾ ಅಂದ್ರೆ ಜಗಳಾ ತೆಗಿಯೊ ನಾವು, ಸರ್ಕಾರಕ್ಕೆ ರಾಶಿ ರಾಶಿ ಹಣದ ಮಳೆಯನ್ನೇ ಸುರಿತಾ ಇದ್ದೀವಿ, ಅದು ಗೊತ್ತಾ?

ನಿಮ್ಮ ಮನೆಯಲ್ಲಿ ಎಷ್ಟು ತರಹದ ವಸ್ತುಗಳಿವೆ ಅಂತಾ ನೀವೇ ಲೆಕ್ಕಾಹಾಕಿ ನೋಡಿ.

ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್‌, ವಿದ್ಯುತ್ತು, ನೀರು, ಅದು-ಇದು ಅಂತ ಹೇಳಿ ಎಲ್ಲಾ ಕಡೆ ನೀವು ಸರ್ಕಾರಕ್ಕೆ ಅಂತ ಪ್ರತಿ ದಿನ ದುಡ್ಡು ಕೊಡ್ತಾನೆ ಇದ್ದೀರಿ.

ಆ ದುಡ್ಡು ತಗೊಂಡು ಸರಿಯಾದ ಸೌಲಭ್ಯ-ಸೇವೆ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ ಹೌದೋ ಅಲ್ವೋ?

ಅದಕ್ಕಾಗಿ ಒಳ್ಳೆಯ ಪ್ರತಿನಿಧಿಯ ಮತ್ತು ಒಳ್ಳೆಯ ಸರ್ಕಾರವನ್ನ ಆಯ್ಕೆ ಮಾಡೋದು ನಿಮ್ಮ ಗುರುತರ ಹೊಣೆಗಾರಿಕೆ.

ಮತದಾನ ಬರಿ ನಿಮ್ಮ ಹಕ್ಕು ಅಲ್ಲ ಕಣ್ರಿ.

ಅದು ನಿಮ್ಮ ಜವಾಬ್ದಾರಿ.

ನಿಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಯಾರಿಗೆ ವೋಟ್‌ ಒತ್ತಿದ್ರೋ , ಅವರಿಂದ ಇವತ್ತು ನಿಮ್ಮ ಸ್ಥಿತಿ ಹೀಗಿದೆ.

ನೀವು ಯಾರಿಗೆ ಒತ್ತುತ್ತೀರೋ ಅದರ ಮೇಲೆ ಮುಂದಿನ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ನಿಂತಿರುತ್ತೆ.

ಯಾವುದೇ ಪಕ್ಷ ಇರಲಿ, ಯಾರೇ ವ್ಯಕ್ತಿ ಇರಲಿ, ಒಟ್ನಲ್ಲಿ ಹೋಗಿ.

ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಿ.

ಆ ಇವಿಎಂ ಮೇಲೆ ನಿಮ್ಮ ಹೆಮ್ಮೆಯ ಬೆರಳನ್ನು ಒತ್ತಿ ಬನ್ನಿ.

“ಮತದಾನ ಮಾಡದವನೇ ನಿಜವಾದ ದೇಶದ್ರೋಹಿ!”

ನಿಮ್ಮ ಸ್ನೇಹಿತರಿಗೂ ಇದನ್ನ ಶೇರ್ ಮಾಡಿ ಒಳ್ಳೆಯದಾಗಲಿ.

-

ಪ್ರವೀಣ ಮಗದುಮ್

#karnatakaelection2023
2.1K viewsedited  04:51
Buka / Bagaimana
2023-05-09 07:49:17

ನಮ್ಮ Website :
https://bit.ly/3nFvO1Z
2.0K viewsedited  04:49
Buka / Bagaimana
2023-05-08 09:46:56
ಬೊಗಳುವ ನಾಯಿಗು,

ಗರ್ಜಿಸುವ ಸಿಂಹಕ್ಕೂ, ಅಜಗಜಾಂತರ ವ್ಯತ್ಯಾಸ ಇದೆ ಅಲ್ವಾ?

ನೀವೇ ಹೇಳಿ,

ಯಾವತ್ತಾದ್ರೂ ಬೊಗಳುವ ಸಿಂಹಾನ ನೋಡಿದೀರಾ?

ಅಯ್ಯೋ ಇದೆಂಥ ಪ್ರಶ್ನೆ!

"ಸಿಂಹ ಯಾವತ್ತಾದ್ರೂ ಬೊಗಳುತ್ತಾ? ಅದು ಘರ್ಜಿಸುತ್ತೆ ಸರ್!"

ಅಂತ ನೀವು ಅನ್ಕೋತಿದ್ದೀರಿ, ನನಗೆ ಗೊತ್ತು.

ಯು ಆರ್ ರೈಟ್. 100 ಪರ್ಸೆಂಟ್ ಕರೆಕ್ಟ್!

ಇನ್ನೊಂದು ಸಣ್ಣ ಪ್ರಶ್ನೆ,
.
.
.
(ಸಖತ್ ಮೋಟಿವೇಷನಲ್)

ಮುಂದೆ ಓದಲು ಕ್ಲಿಕ್ ಮಾಡಿ

https://bit.ly/3B0Gons
558 viewsedited  06:46
Buka / Bagaimana
2023-05-06 13:58:59
1.
2.
3.
4. ಒಂಟಿಯಾಗಿ ನುಗ್ಗುವುದಕ್ಕಿಂತ ಒಂದು ತಂಡ ಕಟ್ಟಿಕೊಂಡು ದಾಳಿ ಮಾಡಬೇಕು!

ಪೋಲೀಸ್, ವಕೀಲರು, ವೈದ್ಯರು, ಎಂಜಿನಿಯರ್, ಪತ್ರಕರ್ತ ಹೀಗೆ ಹಲವಾರು ರಂಗಗಳ ಸ್ನೇಹಿತರನ್ನು ಗಳಿಸಿಕೊಳ್ಳಿ. ಅವರಿಗೆ ಕಷ್ಟ ಬಂದಾಗ ಸಹಾಯಮಾಡಿ. ನಿಮ್ಮ ಕಷ್ಟಗಳಲ್ಲಿ ಅವರ ಸಹಾಯ ಪಡೆಯಿರಿ. ನಿಮ್ಮನ್ನು ಉನ್ನತೀಕರಿಸಿಕೊಳ್ಳಲು ಮತ್ತು ಬೆಂಬಲಿಸಲು ಒಂದು ತಂಡದ ಅಗತ್ಯವಿದೆ. ಅದನ್ನ ನೀವೇ ಕಟ್ಟಿಕೊಳ್ಳಿ.
5.
6.

ಪೋರ್ತಿ ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿ
https://bit.ly/42dEADu
2.0K viewsedited  10:58
Buka / Bagaimana
2023-05-05 18:35:21
747 views15:35
Buka / Bagaimana
2023-05-05 14:24:52
717 views11:24
Buka / Bagaimana
2023-05-02 14:47:21 #kmf_podcasts
Best Motivation
948 viewsedited  11:47
Buka / Bagaimana
2023-05-02 07:05:53 https://kannadamotivationforum.wordpress.com/2023/05/02/%e0%b2%85%e0%b2%b0%e0%b3%8d%e0%b2%a7%e0%b2%b0%e0%b2%be%e0%b2%a4%e0%b3%8d%e0%b2%b0%e0%b3%80%e0%b2%b2%e0%b2%bf-%e0%b2%97%e0%b3%86%e0%b2%a6%e0%b3%8d%e0%b2%a6%e0%b3%81-%e0%b2%ac%e0%b2%82%e0%b2%a6%e0%b3%8b/
955 views04:05
Buka / Bagaimana
2023-05-02 07:01:12
ಅರ್ಧರಾತ್ರೀಲಿ ಗೆದ್ದು ಬಂದೋರು!
(ಕನ್ನಡ ಮೋಟಿವೇಷನಲ್ ಬರಹ)

Case : 1
ಬಿಎಸ್ಸಿಯಲ್ಲಿ ನಾಲ್ಕಾರು ಸಬ್ಜೆಕ್ಟ್ ಗಳನ್ನು ಬ್ಯಾಕ್ ಉಳಿಸಿಕೊಂಡಿದ್ದ ಹುಡುಗನೊಬ್ಬ, ತಾನು ಡ್ರೋನ್ ಕಂಡುಹಿಡಿದ ವಿಜ್ಞಾನಿ, ಜಪಾನ್ ಜರ್ಮನಿಗಳಲ್ಲಿ ಪ್ರಶಸ್ತಿ ಗಳಿಸಿದವ ಅಂತ ಉದ್ದುದ್ದ ಬೊಗಳೆ ಭಾಷಣ ಬಿಡುತ್ತಿದ್ದರೆ ಜನ ಬಾಯಿ ಬಾಯಿ ಬಿಟ್ಕೊಂಡು ಮೂಕವಿಸ್ಮಿತರಾಗಿ ನೋಡ್ತಾರೆ. ಕೆಲ ತಿಂಗಳಲ್ಲೇ ಆತನ ಬಣ್ಣ ಬಯಲಾದಾಗ "ಛೀ" ಅಂತಾ ಮುಖ ತಿರುಗಿಸುತ್ತಾರೆ.

Case :2
ಎಂಬಿಎ ಕೋರ್ಸನ್ನೇ ಓದುದ ಪಡ್ಡೆ ಹುಡುಗನೊಬ್ಬ "ಎಂಬಿಎ ಚಾಯ್ ವಾಲಾ" ಅಂತ ಹೇಳಿಕೊಂಡು ದೇಶದ ಅನೇಕ ನಿರುದ್ಯೋಗಿ ಯುವಕರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

Case:3
ಇನ್ನು ಕರ್ನಾಟಕದಲ್ಲಿ, ಉದ್ಯೋಗ ಕೊಡ್ತೀನಿ ಎಂದು ನಂಬಿಸಿ "ಫ್ರೀಡಂ ಆಪ್" ಮೂಲಕ "ನೀವು ಅಷ್ಟು ದುಡ್ಡು ಮಾಡಬೇಕೇ, ನೀವು ಇಷ್ಟು ದುಡ್ಡು ಮಾಡಬೇಕೆ ಕೋಟಿ ಕೋಟಿ ದುಡಿಯಬೇಕೆ? " ಅಂತ ಹೇಳಿಕೊಂಡು ಕರ್ನಾಟಕದ ಜನಪ್ರಿಯ ವಾರ್ತಾ ವಾಹಿನಿಗಳಲ್ಲಿ, ಯೂಟ್ಯೂಬ್ ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಜಾಹಿರಾತುಗಳನ್ನು ನೀಡಿ ಸಾವಿರಾರು ಯುವಕ ಯುವತಿಯರಿಗೆ ಮೋಸ ಮಾಡಿದ್ದ ಅಕೌಂಟೆಂಟ್ ಒಬ್ಬ ಈಗ...
..
..
..

ಮುಂದೆ ಓದಲು ಇಲ್ಲಿ ಕ್ಲಿಕ್‌ ಮಾಡಿ...

https://kannadamotivationforum.wordpress.com/2023/05/02
787 viewsedited  04:01
Buka / Bagaimana
2023-05-01 15:57:33
ಸಾಧನೆ (ಕವನ)

ಇರುವುದು ನಿನ್ನ ಬಳಿ ಸಾಧನೆಯ ಸಾಧನ.

– ನೀನು ಮೊದಲು ಬಿಡಬೇಕು ಪರರ ಜೊತೆ ಕದನ.

– ಗುರಿಯನ್ನು ಮುಟ್ಟುವುದಕ್ಕೆ ಕಷ್ಟ ಪಡು ದಿನ ದಿನ.

– ಅವಸರವನ್ನು ತೊರೆದು ಕಾರ್ಯ ನಡೆಯಲಿ ನಿಧಾನ.

*ನಿಯಂತ್ರಣದಲಿ ಇಟ್ಟಿಕೋ ನಿನ್ನ ಆ ತನು – ಮನ.

– ಸಮಸ್ಯೆಗಳು ಕಾಣುವವು ನಿನ್ನ ಹಾದಿಯಲ್ಲಿ ನಾನಾ.

– ಪರಿಹಾರ ಕಂಡುಕೊಂಡು ಮುಂದೆ ನಡೆಯಲಿ ನಿನ್ನ ಜೀವನ.

– ಸಾಧಿಸಿದ ನಂತರ ನಿನಗೆ ಎಲ್ಲರೂ ಮಾಡುತ್ತಾರೆ ಗುಣಗಾನ.

*ಸಾಧಕನಾದ ನಂತರ ಹೊಳೆಯುತ್ತದೆ ನಿನ್ನ ಚೆಂದದ ವದನ.

– ನಿನ್ನ ಸಾಧನೆಗೆ ಸಹಕಾರ ಕೊಟ್ಟವರಿಗೆ ಮಾಡು ನೀ ನಮನ.

– ರಾಕೇಶ ವಿ ಪತ್ತಾರ,

ನಮ್ಮ Website:

https://kannadamotivationforum.wordpress.com/2023/05/01

ನಿಮ್ಮ ಮೋಟಿವೇಷನಲ್‌
ಬರಹ, ಕಥೆ,ಕವನಗಳನ್ನು
kannadamotivationalforum@gmail.com
ಗೆ ಕಳುಹಿಸಿ
676 viewsedited  12:57
Buka / Bagaimana