Get Mystery Box with random crypto!

All the very best to all Future Police officials ಪರೀಕ್ಷಾ ಕೇಂ | ಚಿಗುರು....ಯಶಸ್ಸಿನ ಹಾದಿಯತ್ತ...👍

All the very best to all Future Police officials
ಪರೀಕ್ಷಾ ಕೇಂದ್ರದಲ್ಲಿನ ಎಲ್ಲ ಅಭ್ಯರ್ಥಿಗಳನ್ನ ನೋಡಿ ಹೆದರುವ ಅವಶ್ಯಕತೆಯಿಲ್ಲ, ನಿಮಗೆ ಬೇಕಾಗಿರುವುದು ಒಂದು ಹುದ್ದೆ ಅದರ ಮೇಲೆ‌ ಗಮನ ಇರಲಿ, ಪರೀಕ್ಷೆಯಲ್ಲಿ ಯಾವಾಗಲೂ ನಮ್ಮ ಗೆಲುವು- ಸೋಲು ನಿಶ್ಚಯಿಸುವುದು ನಮ್ಮ ಪ್ರಯತ್ನವೇ ಹೊರತು ಎಷ್ಟು ಜನರಿದ್ದಾರೆ ಎಂಬುದರ ಮೇಲಲ್ಲ. ನಿಮ್ಮ ಪರೀಕ್ಷೆಯನ್ನ ನಿಮ್ಮ ಪ್ರಯತ್ನದ ಮೇಲೆ ನಂಬಿಕೆಯಿಟ್ಟು , ನಿಮ್ಮ ಹಗಲಿರುಳು ಅಭ್ಯಸಿಸಿರುವುದರ ಮೇಲೆ ವಿಶ್ವಾಸ ಇಟ್ಟು ಮುಂದಿನ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳಿ. ಪರೀಕ್ಷೆಯ ಕೊನೆಯ ನಿಮಿಷದವರೆಗೂ ಸೋಲದಿರಿ, ಅಂಜದಿರಿ, ನಿಮ್ಮ ಮೇಲೆ ಆತ್ಮವಿಶ್ವಾಸವಿರಲಿ. ಪರೀಕ್ಷೆ ಸುಲಭ ಅಥವಾ ಕಠಿಣ ಏನೇ ಇದ್ದರೂ ನೀವು ನಿಜ ಸ್ಪರ್ಧಾರ್ಥಿ ಆಗಿದ್ದರೆ ನಿಮಗೆ ಕಠಿಣವಾಗಿರುವುದು ಎಲ್ಲರಿಗೂ ಕಠಿಣವೇ ಎಂಬುದ ಮರೆಯದಿರಿ. ಇವತ್ತಿನ ಇಂದಿನ ಸುಸಮಯ ನಿಮ್ಮದಲ್ಲದೆ ಮತ್ತಾರದ್ದು ಅಲ್ಲವೇ. All the very best once again